ಕೇಂಬ್ರಿಜ್ ರಿಚರ್ಡ್ ಓಅನ್
1717-1802. ಇಂಗ್ಲಿಷ್ ಕವಿ ಮತ್ತು ಪ್ರಬಂಧಕಾರ. ಲಂಡನಿನಲ್ಲಿ ಹುಟ್ಟಿದ ಈತ ಆಕ್ಸ್‍ಫರ್ಡಿನ ಈಟನ್ ಮತ್ತು ಸೇಂಟ್ ಜಾನ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ 1751ರಲ್ಲಿ ಟ್ವಿಕೆನ್ ಹ್ಯಾಮ್‍ಗೆ ತೆರಳಿದ. ಅಲ್ಲಿ ಈತನ ಸಮಕಾಲೀನರೆನಿಸಿದ ಥಾಮಸ್ ಗ್ರೇ, ಚಾಲ್ರ್ಸ್ ಜೇಮ್ಸ್ ಫಾಕ್ಸ್ ಮತ್ತು ಆರ್ಲ್ ಆಫ್ ಚಾಥಮ್ ಮುಂತಾದ ಪ್ರಸಿದ್ಧ ವ್ಯಕ್ತಿಗಳ ನಡುವೆ ಬಾಳಿದ. ಹೊರೇಸ್ ವಾಲ್‍ಪೊಲ್ ತನ್ನ ಬರಹಗಳಲ್ಲಿ ಬರುವ ಸುದ್ದಿ ಸಂಗ್ರಹಗಾರನ ವ್ಯಕ್ತಿ ಚಿತ್ರಣದಲ್ಲಿ ಕೇಂಬ್ರಿಜ್‍ನ ಹಾಸ್ಯ ಪ್ರಸಂಗಗಳನ್ನು ಉಲ್ಲೇಖಿಸಿದ್ದಾನೆ. 1753-56ರ ಗಡುವಿನಲ್ಲಿ ಕೇಂಬ್ರಿಜ್ 21 ಪ್ರಬಂಧಗಳನ್ನು ನೀಡಿದ್ದಾನೆ. ಈತನ ಪ್ರಖ್ಯಾತ ಕೃತಿ ಸ್ಕ್ರಿಬಲ್ ರೈಡ್ (1751). ಇದು ವಿದ್ಯಾಭ್ಯಾಸದ ವಿಡಂಬನಾತ್ಮಕ ಅಣಕುಕಾವ್ಯ. ಈತ ಟ್ವಿಕೆನ್‍ಹ್ಯಾಮ್‍ನಲ್ಲೇ ಮರಣ ಹೊಂದಿದ.				
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ